Thursday, 1 September 2016

ಆಕೆ ರಾಧೆಯಾದಳು, ನಾನು ಕೃಷ್ಣನಾಗಿ ಉಳಿಯಲಿಲ್ಲ!


ಯಾವುದಾದರೂ ಪ್ರೀತಿಯ ಜೋಡಿಯ ಅನನ್ಯತೆ ನೋಡಿದರೆ ಕೃಷ್ಣ ರಾಧೆಯ ಪ್ರೀತಿ ಅವರದ್ದು ಎನ್ನುತ್ತೇವೆ. ಕಾಯುವುದರಲ್ಲಿ ಪ್ರೀತಿಯ ಉತ್ಕೃಷ್ಟತೆಯನ್ನು ಜಗತ್ತಿಗೆ ಸಾರಿದ ಮಹಾನ್‌ ಪ್ರೇಮಿ ರಾಧೆ. ಕೃಷ್ಣ ಮರಳಿ ಗೋಕುಲಕ್ಕೆ ಬರುವುದಿಲ್ಲ ಎಂಬುದೂ ಗೊತ್ತಿದ್ದೂ ಅವನ ಬರುವಿಕೆಯಲ್ಲಿ, ಅವನ ಕೊಟ್ಟು ಹೋದ ಕೊಳಲಿನಲ್ಲಿ ಕೃಷ್ಣನನ್ನು ಕಾಣುತ್ತಾ, ಆತನನ್ನೇ ಆರಾಧಿಸುತ್ತಾ, ಧೇನಿಸುತ್ತಾ ತನ್ನ ಇಡೀ ಜೀವನವನ್ನು ಗೋಕುಲದಲ್ಲಿ ಕಳೆಯುವ ರಾಧೆಗೆ ಯಾರು ಸಾಟಿ? ಇತ್ತ ಕೃಷ್ಣನೋ.. ಆಕೆಯನ್ನು ಮರತೇ ಹೋದನಾ ಎಂಬ ಅನುಮಾನ ಕಾಡುವಷ್ಟು ವಿಮುಖನಾಗಿರುತ್ತಾನೆ ಎನ್ನುವ ಭಾವ. ಯಾರಿಗೆ ಗೊತ್ತು ಆತನೂ ರಾಧೆಯ ಧ್ಯಾನದಲ್ಲಿ ಇದ್ದಿರಬಹುದು. ಹೇಳಿ ಕೇಳಿ ಆತ ಪರಮಾತ್ಮ. ಲೋಕೋದ್ಧಾರದಲ್ಲಿ ರಾಧೆಯ ಪ್ರೀತಿಯ ಬಿಂಬ ಕಂಡಿದ್ದರೂ ಕಂಡಿರಬಹುದು. ಆ ಕವಿಗೆ ಅದರ ಸುಳಿವು ಇದ್ದರೂ ಬಚ್ಚಿಟ್ಟರಬಹುದು! ಯಾಕೆಂದರೆ, ಅವರಿಬ್ಬರ ಪ್ರೀತಿ ಅಂಥ ಉತ್ಕೃಷ್ಟತೆಯ ಶಿಖರದ ತುದಿಯಲ್ಲಿರುವಂಥದ್ದು. ರಾಧೆಗೆ ತ್ಯಾಗವೇ ಪ್ರೀತಿಯಾದರೆ, ಕೃಷ್ಣನಿಗೆ ತಾನೇ ತಾನಾಗಿದ್ದ ಕೊಳಲಿನ ಸಂಗ ಬಿಟ್ಟು ಹೋದದ್ದು ಎಲ್ಲವೂ ತ್ಯಾಗದ ಮಹೋನ್ನತ ಮಾದರಿಯಲ್ಲವೇ? ಹಾಗಾದರೆ ಪ್ರೀತಿ ಎಂದರೆ ತ್ಯಾಗವೇ? ಇರಬಹುದು. ತ್ಯಾಗವೇ ಪ್ರೀತಿಯಾಗಿರಬಹುದು, ಕಾಯವುದೇ ಪ್ರೀತಿಯ ಪರಮೋಚ್ಛ ಗುರಿಯಾಗಿರಬಹುದು. ಈ ಎಲ್ಲವೂ ಕೃಷ್ಣ ರಾಧೆಯರ ಪ್ರೀತಿಯ ಕಡಲಲ್ಲಿ ದೊರೆಯುವ ಅನರ್ಘ್ಯ ರತ್ನಗಳೇ... ಕೃಷ್ಣಜನ್ಮಾನಷ್ಟಮಿಯ ದಿನ ನನ್ನ ರಾಧೆಯ ನೆನಪುಗಳ ಜೋಕಾಲಿಯಲ್ಲಿ ಜೀಕುತ್ತಿರುವಾಗಲೇ; ಅವಳೇನೋ ರಾಧೆಯಾಗಿ ಉಳಿದಳು. ನಾನು ಕೃಷ್ಣನಾಗಿ ಉಳಿಯಲಿಲ್ಲ ಎಂಬ ಅಪರಾಧಿ ಭಾವ ಒತ್ತರಿಸಿ ಬಂತು.........[ಇನ್ನಷ್ಟು ಓಧಿ]

No comments:

Post a Comment