Showing posts with label Drink. Show all posts
Showing posts with label Drink. Show all posts

Thursday, 1 September 2016

ನೀರನ್ನು ಯಾವಾಗ..? ಎಷ್ಟು..? ಹೇಗೆ ಕುಡಿಯಬೇಕು..?

ಸಾಮಾನ್ಯವಾಗಿ ಊಟ ಮಾಡುವಾಗ ನೀರು ಕುಡಿಯುವುದು ಎಲ್ಲರ ಪದ್ಧತಿ. ಸಂಶೋಧನೆಯ ಪ್ರಕಾರ ಊಟದ ಸಮಯದಲ್ಲಿ ನೀರು ಕುಡಿಯಬಾರದು. ಊಟದ ಸಮಯದಲ್ಲಿ ನೀರು ಕುಡಿದರೆ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎನ್ನುವುದು ಸಂಶೋಧನೆಯಿಂದ ತಿಳಿದ ಸಂಗತಿ. ಹೀಗಾಗಿ ಊಟದ ಸಮಯದಲ್ಲಿ ನೀರನ್ನು ಕುಡಿದರೆ ನಮ್ಮ ದೇಹದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿದುಕೊಳ್ಳೋಣ.
* ಬಾಯಿಯಲ್ಲಿ ಉತ್ಪನ್ನವಾಗುವ ಲಾಲಾರಸವು ಆಹಾರದ ಜೀರ್ಣಕ್ರಿಯೆಗೆ ಸಹಾಯಕ. ಇದರಲ್ಲಿ ಆಹಾರವನ್ನು ವಿಘಟಿಸುವ ಕಿಣ್ವಗಳಿರುತ್ತವೆ. ಊಟದ ಸಮಯದಲ್ಲಿ ನೀರನ್ನು ಕುಡಿದಾಗ ಲಾಲಾರಸ ಕರಗಿಹೋಗುವುದಲ್ಲದೆ ಆಹಾರದ ವಿಘಟನೆಗೆ ತೊಂದರೆಯುಂಟಾಗಿ ಜೀರ್ಣಕ್ರಿಯೆ ಕಷ್ಟವಾಗುತ್ತದೆ.
* ಜೀರ್ಣಕ್ರಿಯೆಗೆ ಬಾಧೆ-ನಮ್ಮ ಜಠರದಲ್ಲಿ ಇರುವ ಈ ಆಮ್ಲ ಜೀರ್ಣಕ್ರಿಯೆಗೆ ಸಹಾಯಕ. ಜತೆಗೆ ನಾವು ಸೇವಿಸಿದ ಆಹಾರದಲ್ಲಿ ದೇಹಕ್ಕೆ ಹಾನಿಕಾರಕವಾದ ಬ್ಯಾಕ್ಟೀರಿಯಾವನ್ನು ನಾಶಮಾಡುತ್ತವೆ. ಈ ಆಮ್ಲದಲ್ಲಿರುವ ಜೀರ್ಣಕಾರಿ ಕಿಣ್ವಗಳು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಿ ಅದರಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ನಮ್ಮ ಆರೋಗ್ಯವರ್ಧಿಸಲು ಸಹಾಯ ಮಾಡುತ್ತವೆ. ಊಟದ ಸಮಯದಲ್ಲಿ ಹೆಚ್ಚು ನೀರು ಸೇವಿಸಿದರೆ ಜೀರ್ಣಕ್ರಿಯೆಯಲ್ಲಿ ಏರುಪೇರಾಗಿ ಕರುಳಿನ ಗೋಡೆಗೂ ಹಾನಿಕರ. ಜೀರ್ಣಕ್ರಿಯೆ ನಿಧಾನವಾಗಿ ಸಾಗುವುದು. ಸಣ್ಣ ಕರುಳಿನಲ್ಲಿ ಪೋಷಕಾಂಶ ಹೀರಿಕೊಳ್ಳುವ ಪ್ರಕ್ರಿಯೆ ಕುಂಠಿತಗೊಳ್ಳುವುದು.
* ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಆಹಾರದ ಸೇವನೆಯಲ್ಲಿ ಕುಡಿಯುವ ನೀರು ಆಹಾರದಲ್ಲಿನ ಗ್ಲೈಕಮಿಕ್, ಇನ್ಸುಲಿನ್ ಪ್ರಮಾಣ ಹೆಚ್ಚಿಸುವುದು. ಜೀರ್ಣಕ್ರಿಯೆ ನಿಧಾನವಾದಾಗ ಆಹಾರ ಕೊಬ್ಬಾಗಿ ಪರಿವರ್ತನೆಗೊಳ್ಳುವುದು. ಇದರಿಂದ ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿರುತ್ತದೆ.
* ದೇಹದ ತೂಕ ಹೆಚ್ಚಾಗುವುದು. ಸ್ಥೂಲಕಾಯಿಗಳಾಗುವ ಸಾಧ್ಯತೆ ಇರುತ್ತದೆ. ಊಟದ ಸಮಯದಲ್ಲಿ ನೀರು ಕುಡಿದಾಗ ನೀರು ಗ್ಯಾಸ್ಟ್ರಿಕ್ ದ್ರವಗಳನ್ನು ಕರಗಿಸುತ್ತದೆ. ಈ ಮಿಶ್ರಣ ಗಡುಸು ಜತೆಗೆ ಜಠರದಲ್ಲಿ ಕಿಣ್ವಗಳ ಉತ್ಪತ್ತಿಯನ್ನು ಕುಂಠಿತವಾಗಿಸುತ್ತದೆ. ಇದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆಯುಂಟಾಗಿ ಎದೆಯುರಿ, ಆಸಿಡಿಟಿ ಸಮಸ್ಯೆ ಎದುರಾಗುತ್ತದೆ.....(ಇನ್ನಷ್ಟು ಓಧಿ).....