ಬೆಳಗಾಗಿ ಎದ್ದು ನರಿ ಮುಖ ನೋಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿ ಅನಾದಿ ಕಾಲದಿಂದಲೂ ಇದೆ. ಇತ್ತೀಚಿನ ದಿನಗಳಲ್ಲಿ ಈ ನಂಬಿಕೆ ದ್ವಿಗುಣಗೊಂಡಿದ್ದು, ಬಹುತೇಕ ಆಸ್ತಿಕರ ಮನೆಗಳಲ್ಲಿ ಜೋಡಿ ನರಿಗಳ ಚಿತ್ರಪಟ ಬಾಗಿಲಿಗೆ ಎದುರಾಗಿ ರಾರಾಜಿಸುತ್ತಿರುತ್ತದೆ. ಇಂತಹುದೇ ಅನೇಕ ವಿಶಿಷ್ಟ, ವಿಚಿತ್ರ ನಂಬಿಕೆಗಳು ವಿಶ್ವದಾದ್ಯಂತ ಚಾಲ್ತಿಯಲ್ಲಿವೆ. ಈ ಪೈಕಿ ಇಡೀ ವಿಶ್ವದಲ್ಲೇ ಅತ್ಯಂತ ಜನಪ್ರಿಯವಾಗಿರುವ ನಂಬಿಕೆ ನಗುಮೊಗದ ಬುದ್ಧನ ಪ್ರತಿಮೆ ಕುರಿತಾದದ್ದು. ನಗುಮೊಗದ ಬುದ್ಧ ಎಂದೇ ಪ್ರಸಿದ್ಧವಾಗಿರುವ ಬುದ್ಧನ ನಿಜ ನಾಮಧೇಯ ಬುದಾಯಿ. ಈತ ಚೀನೀಯರ ಜಾನಪದ ಕತೆಗಳ ನಾಯಕ ಎಂದು ಹೇಳಲಾಗಿದೆ. ಈ ಬುದಾಯಿ ಹೆಸರಿಗೂ ಸಂಸ್ಕøತ ಮೂಲದ ಬುದ್ಧನ ಹೆಸರಿಗೂ ಯಾವುದೇ ಸಂಬಂಧ ಇಲ್ಲದಿರುವುದು ವಿಶೇಷ.
ನಗುಮೊಗದ ಬುದ್ಧ ಚೀನೀಯರಲ್ಲಿ ಹೊಟಾಯಿ ಎಂದೇ ಜನಪ್ರಿಯವಾಗಿದ್ದಾನೆ. ಈತನ ಚಿತ್ರಪಟ ಅಥವಾ ಪ್ರತಿಮೆಯನ್ನು ಯಾವಾಗಲೂ ಮನೆಯ ಬಾಗಿಲಿಗೆ ಎದುರಾಗಿ ನೇತು ಹಾಕಲಾಗಿರುತ್ತದೆ. ಇದು ಸಂತೋಷ, ಅದೃಷ್ಟ ಹಾಗೂ ಸಂಪತ್ತಿಗೆ ಸಂಕೇತ ಎಂದು ನಂಬಲಾಗಿದೆ.......[ Read More]
No comments:
Post a Comment